ಚಿತ್ರ: ಕಿಲಾಡಿ ಜೋಡಿ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್-ನಾಗೇಂದ್ರ
ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಜೆ.ಯೇಸುದಾಸ್

ಹಿಪ್ ಹಿಪ್ ಹುರ್ರೇ..........
ಲ ಲ್ಲ ಲ ಲಾ ಲ ....ಲ ಲ್ಲ ಲ ಲಾ ಲ........
ಕಿಲಾಡಿ ಜೋಡಿ......ಕಿಲಾಡಿ ಜೋಡಿ........(೨)
ಸಮಯವ ನೋಡಿ ಸಂಚನು ಮಾಡಿ ಹಾಕುವೆವು ಮೋಡಿ (೨)
ಕಿಲಾಡಿ ಜೋಡಿ...ಕಿಲಾಡಿ ಜೋಡಿ....

ಅನ್ಯಾಯ ಮಾಡೋಲ್ಲ ಸುಳ್ಳನ್ನು ಹೇಳೋಲ್ಲ
ಬಚ್ಚಿಟ್ಟ ಹಣವನ್ನು ನಾವೆಂದು ಉಳಿಸೋಲ್ಲ
ದೋಚಿದ್ದು ಬಾಚಿದ್ದು ಎಲ್ಲಾ fifty...fifty.....
ಲ..ಲ್ಲ...ಲ...ಲ........
ಈ ಮನದ ಆಸೆಯೆ ಆ ಮನದ ಆಸೆಯು
ಈ ಕೈಯ್ಯ ಭಾಷೆಯೆ ಆ ಕೈಯ್ಯ ಭಾಷೆಯು

ಎಂದೆಂದು ಹೀಗೆಯೆ ನಮ್ಮ ನೀತಿಯು
ಹಗಲೇನು ಇರುಳೇನು ಅಗಲದು ಈ ಜೋಡಿ.........{ಪಲ್ಲವಿ}

ನುಡಿಯಲ್ಲಿ ಜಾಣರು ನಡೆಯಲ್ಲಿ ಜಾಣರು
ಕೃತಿಯಲ್ಲಿ ಜಾಣರು ಯಾತಕ್ಕು ಸೋಲರು
ನಮ್ಮಾ ಸಮಾನರು ಎಲ್ಲೂ ಕಾಣರು
ಲ..ಲ್ಲ. ...ಲ...ಲ್ಲ....ಲ.ಲ...

ಮೋಸಕ್ಕೆ ಮೋಸವು ರೋಷಕ್ಕೆ ರೋಷವು
ದ್ವೇಷಕ್ಕೆ ದ್ವೇಷವು ಸ್ನೇಹಕ್ಕೆ ಸ್ನೇಹವು
ನಮ್ಮಾ ಮಂತ್ರವು
ಕಿಲಾಡಿ ಜೋಡಿ......ಕಿಲಾಡಿ ಜೋಡಿ.....

Category: ಕನ್ನಡ ಚಿತ್ರಸಾಹಿತ್ಯ
Category: ಕಿಲಾಡಿ ಜೋಡಿ ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
Category:Kannada